Content Services

Content Services

ವೈಭವಿ ಗೋಪಶೆಟ್ಟಿ

ನೀವು  ಬಂಜೆತನ ಮತ್ತು ಸಂತಾನ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಮಗುವಿಗಾಗಿ ಹಲವಾರು ಆಸ್ಪತ್ರೆಗಳಿಗೆ ಅಲೆದು ಬಗೆ ಬಗೆಯ ಚಿಕಿತ್ಸೆಗಳನ್ನು ಮಾಡಿಸಿ ಫಲ ಸಿಗದೇ ನಿರಾಶರಾಗಿದ್ದೀರಾ? ಈ ಕಾರಣದಿಂದ ಜೀವನದಲ್ಲಿ ಮಾನಸಿಕವಾಗಿ ಕುಗ್ಗಿ ಹತಾಶಾರಾಗಿದ್ದೀರಾ? ಹಾಗಿದ್ದರೆ ನೀವು ವರದಾನ್ ಫರ್ಟಿಲಿಟಿ & ಲ್ಯಾಪರೊಸ್ಕೊಪಿ ಸೆಂಟರ್ ನ ಸಿಇಓ ಮತ್ತು ಕೌನ್ಸಿಲರ್ ಆದ ಶ್ರೀಮತಿ ವೈಭವಿ ಗೋಪಶೆಟ್ಟಿ ಅವರನ್ನು ಭೇಟಿಯಾಗಲೇಬೇಕು. ದಕ್ಷಿಣ ಭಾರತದ ಅಗ್ರಗಣ್ಯ ಲ್ಯಾಪರೊಸ್ಕೊಪಿ ತಜ್ಞ ಮತ್ತು ಶಸ್ತ್ರಚಿಕಿತ್ಸೆಕರಾದ ವಿಜಯ್ ಕುಮಾರ್ ಪಿ ಕೆ ಯವರ ಧರ್ಮಪತ್ನಿಯಾಗಿರುವ ವೈಭವಿಯವರು ಮೂರು ಮಕ್ಕಳ ಸುಂದರ ಪಾರಿವಾರವನ್ನು ನಿಭಾಯಿಸುವುದರ ಜೊತೆಗೆ ತನ್ನ ಪತಿಯ ಜೊತೆಗೂಡಿ ವರದಾನ್ ಸಂಸ್ಥೆಯನ್ನು ದೇಶದ ಅತ್ಯುತ್ತಮ ivf ಸೆಂಟರ್ ಅನ್ನಾಗಿ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. Msc  ಗಣಿತ ವಿಷಯದ ಉಪನ್ಯಾಸಕಿಯಾಗಿದ್ದ ವೈಭವಿಯವರು ತಮ್ಮ ವಿವಾಹದ ನಂತರ ವರದಾನ್ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಉದ್ದೇಶದಿಂದ ತಮ್ಮ ಸರಕಾರಿ ಕೆಲಸವನ್ನು ತೊರೆದು ತಮ್ಮ ಪತಿ ಡಾ ವಿಜಯ್ ಕುಮಾರ್ ಜತೆ ಕೈ ಜೋಡಿಸಿದರು. ಉಪನ್ಯಾಸಕಿಯಾಗಿ ಉತ್ತಮ ಅನುಭವ ಹೊಂದಿರುವ ವೈಭವಿಯವರು ಅದ್ಭುತ ಮಾತುಗರಿಕೆ ಮತ್ತು ವಿಷಯ ನಿರೂಪಣೆಯಲ್ಲಿ ನಿಷ್ಣಾತರಾಗಿದ್ದಾರೆ ನುರಿತ ಕೌನ್ಸಿಲರ್ ಆಗಿರುವ ವೈಭವಿಯವರು ಮೊದಲ ಸಮಾಲೋಚನೆಯಲ್ಲಿಯೇ ನೊಂದವರ ಸಮಸ್ಯೆಗಳ ಮೂಲವನ್ನು ತಿಳಿದುಕೊಂಡು ತಮ್ಮ ಸ್ಫೂರ್ತಿದಾಯಕ ಮಾತುಗರಿಕೆಯ ಮೂಲಕ ಹತಾಶಾರಾಗಿರುವ, ಕುಗ್ಗಿರುವ ದಂಪತಿಗಳಿಗೆ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ತುಂಬಿ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಸೂಚಿಸುತ್ತಾರೆ. ನೊಂದವರಿಗೆ ಕೇವಲ ತಾವು ಪ್ರೀತಿ ತೋರಿಸುವುದಷ್ಟೇ ಅಲ್ಲದೆ, ನೊಂದವರ ಸಮಸ್ಯೆಗಳಿಗೆ ಮಿಡಿಯುವ ನೊಂದವರ ಪ್ರತಿ ಪ್ರೀತಿ, ಕರುಣೆ ಹಾಗೂ ಸಹಾನುಭೂತಿ ಹೊಂದಿರುವ ಸಮರ್ಥ ವೈದ್ಯರ ತಂಡ ಕಟ್ಟಿರುವ ವೈಭವಿಯವರು ಪ್ರೀತಿ ವಿಶ್ವಾಸದಿಂದ ತುಂಬಿರುವ ಉತ್ತಮ ಸೇವೆ ನೀಡುವುದನ್ನೇ ತಮ್ಮ ಸಂಸ್ಥೆಯ ಧ್ಯೇಯವನ್ನಾಗಿಸಿಕೊಂಡಿದ್ದಾರೆ. ವರದಾನ್ ಸಂಸ್ಥೆಯಷ್ಟೇ ಅಲ್ಲದೆ ಪ್ರತಿಭಾಶಾಲಿ ಪೀಳಿಗೆಯನ್ನು ಸಮಾಜಕ್ಕೆ ಕೊಡುವ ಉದ್ದೇಶದಿಂದ ಸಂಗೀತ, ನ್ರತ್ಯ, ವ್ಯಕ್ತಿತ್ವ ವಿಕಾಸನ, ಕ್ರೀಡೆ ಹೀಗೆ ಹತ್ತು ಹಲವು ಬಗೆಯ ಕಲೆಗಳ ತರಬೇತಿ ನೀಡುವ muzigal ಎಂಬ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ತಮ್ಮ ವರದಾನ್ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಅದ್ಭುತ ವಿಚಾರಗಳುಳ್ಳ ವಿಡಿಯೋಗಳನ್ನು ಹಂಚಿಕೊಳ್ಳುವ ವೈಭವಿಯವರು ಹಲವಾರು ಜನರ ಬದುಕಲ್ಲಿ ಸಾಕಾರಾತ್ಮಕ ಪರಿಣಾಮವನ್ನು ಬೀರಿದ್ದಾರೆ. ಬಂಜೆತನದಿಂದ ಬಳಲುತ್ತಿರುವ ದಂಪತಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವೈಭವಿಯವರು ತಮ್ಮ ವರದಾನ್ ಸಂಸ್ಥೆಯ ಮೂಲಕ ಮಕ್ಕಳಿಲ್ಲದೆ ಕೊರಗುತ್ತಿರುವ ದಂಪತಿಗಳಿಗಾಗಿ ಉಚಿತ ಶಿಬಿರಗಳನ್ನು ನಡೆಸುತ್ತಾರೆ. ಇಲ್ಲಿ ನೀವು ಸರಳವಾಗಿ ವೈಭವಿಯವರನ್ನು ಭೇಟಿಯಾಗಬಹುದು. ಉಚಿತ ಶಿಬಿರಗಳ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ ಅಥವಾ  ವಾರದಾನ್ ನ ಈ ವಿವರಗಳ ಮೂಲಕ ಸಂಪರ್ಕಿಸಿ.

Dr Vijay Kumar

ನೀವು ಬಂಜೆತನ ಮತ್ತು ಸಂತಾನ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಪ್ರತಿಷ್ಠಿತ ವರದಾನ ಫರ್ಟಿಲಿಟಿ & ಲ್ಯಾಪರೋಸ್ಕೋಪಿ ಸೆಂಟರ್ ನ ಜನಪ್ರಿಯ ವೈದ್ಯರಾದ ಡಾ. ವಿಜಯ್ ಕುಮಾರ್ ಪಿ ಕೆ ಅವರನ್ನು ಭೇಟಿಯಾಗಿ.

ಆಪರೇಟಿವ್ ಲ್ಯಾಪರೋಸ್ಕೋಪಿ ಕ್ಷೇತ್ರದಲ್ಲಿ ಅಪಾರ ಪರಿಣತಿ ಹೊಂದಿರುವ ಡಾ. ವಿಜಯ್ ಕುಮಾರ್ ಪಿ.ಕೆ ಅವರು 30 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರುವ ಅತ್ಯಂತ ಪ್ರಖ್ಯಾತ ಶಸ್ತ್ರಚಿಕಿತ್ಸಕರು. ದಕ್ಷಿಣ ಭಾರತದ ಅಗ್ರಗಣ್ಯ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. ಸ್ತ್ರೀ ಸಂಬಂಧಿ ಸಮಸ್ಯೆಗಳು, ಮಕ್ಕಳಾಗದೇ ಇರುವುದು, ಬಂಜೆತನ ಮುಂತಾದ ಸಮಸ್ಯೆಗಳಿಗೆ ತಮ್ಮ ಚಿಕಿತ್ಸೆಯ ಮೂಲಕ ಪರಿಹಾರ ನೀಡಿ ನೊಂದವರ ಬಾಳಲ್ಲಿ ಬೆಳಕಾಗಿದ್ದಾರೆ.

ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧೆಡೆ ಸಂಚರಿಸಿ ಶಸ್ತ್ರಚಿಕಿತ್ಸೆ ನಡೆಸುವ ಅವರು ಬಹುಬೇಡಿಕೆಯ ಶಸ್ತ್ರಚಿಕಿತ್ಸಕರಾಗಿದ್ದಾರೆ. ಪ್ರತಿದಿನ ಕನಿಷ್ಠ 5ರಿಂದ 10 ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ಡಾ. ವಿಜಯ್ ಕುಮಾರ್ ಪಿ ಕೆ ಅವರು ಕಳೆದ 25 ವರ್ಷಗಳಿಂದ ನಡೆಸಿರುವ ಶಸ್ತ್ರಚಿಕಿತ್ಸೆಗಳ ಸಂಖ್ಯೆಯನ್ನು ಊಹಿಸಿಕೊಂಡರೂ ಸಹ ಬೆರಗು ಮೂಡುತ್ತದೆ.

ತಜ್ಞ ವೈದ್ಯರ ತಂಡ ಹೊಂದಿರುವ ಡಾ. ವಿಜಯ್ ಕುಮಾರ್ ರವರು ಅತ್ಯಾಧುನಿಕ ಡೈಗ್ನೋಸ್ಟಿಕ್ ಲ್ಯಾಬ್ ಮತ್ತು ಕಟಿಂಗ್ ಎಡ್ಜ್ ತಂತ್ರಜ್ಞಾನದ ಮೂಲಕ ತಮ್ಮ ವರದಾನ ಫೆರ್ಟಿಲಿಟಿ & ಲ್ಯಾಪ್ರೋಸ್ಕೋಪಿ ಸೆಂಟರ್ ನಲ್ಲಿ ಪರಿಣಾಮಕಾರಿ ಚಿಕಿತ್ಸೆಯನ್ನು ನೀಡುತ್ತಾರೆ.

ನಿಮ್ಮ ಒಂದು ಕರೆ ತಂದೆ ತಾಯಿಯಾಗಬೇಕೆಂಬ ನಿಮ್ಮ ಕನಸನ್ನು ನನಸಾಗಿಸಬಲ್ಲದು, ಕೂಡಲೇ ಕರೆ ಮಾಡಿ ಭೇಟಿಯ ದಿನಾಂಕವನ್ನು ಇಂದೇ ನೊಂದಾಯಿಸಿಕೊಳ್ಳಿ.

ಪ್ರಾಜೆಕ್ಟ್ ವರದಾನ

Vardhan fertility and laparoscopy centre… its not just a name, not just an institution, not just a hospital, its an emotion… ಹೌದು ವರದಾನ್ ivf ಸೆಂಟರ್ ಒಂದು ಆಸ್ಪತ್ರೆಯಷ್ಟೇ ಅಲ್ಲ. ವರದಾನ್ ಎಂದರೆ ಭರವಸೆ, ವರದಾನ್ ಎಂದರೆ ನಂಬಿಕೆ, ಅಸಾಧ್ಯವನ್ನು ಸಾಧ್ಯ ಮಾಡುವ ವೈದ್ಯಕೀಯ ಶಕ್ತಿ, ಮಕ್ಕಳಿಲ್ಲದೆ ಹತಾಶಾರಾಗಿ ಕೊರಗುತ್ತಿರುವ ದಂಪತಿಗಳ ಪಾಲಿನ ಆಶಾಕಿರಣ. ಸಾವಿರಾರು ಜನರಿಗೆ ಪಾಲಿಗೆ ಇದು ಸುಂದರ ಪಾರಿವಾರವನ್ನು ಕಟ್ಟಿ ಕೊಟ್ಟು ಸುಮಧುರ ಬಾಂಧವ್ಯದ ವರದಾನ ನೀಡಿದ ದೇವಮಂದಿರ. ಇಂದು ನಮ್ಮ ನಿಮ್ಮೆಲ್ಲರ ವರದಾನ ಸಂಸ್ಥೆ 10 ವರ್ಷಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಅಂತ ತಿಳಿಸೋಕೆ ತುಂಬಾ ಹೆಮ್ಮೆ ಆಗ್ತಾ ಇದೆ.

ಮಗುವನ್ನು ಹೆತ್ತು ತಂದೆ ತಾಯಿ ಎನಿಸಿಕೊಳ್ಳುವ ಜೀವನದ ಸುಮಧುರ ಅಧ್ಯಾಯವನ್ನು ಆರಂಭಿಸಲು ಕಾಯುತ್ತಿರುವ ದಂಪತಿಗಳಿಗೆ ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಸೇವೆಗಳನ್ನು ನೀಡುವ ಉದ್ದೇಶದಿಂದ ನಮ್ಮ ವರದಾನ್ ಸಂಸ್ಥೆಯ ಮೊದಲ ಶಾಖೆ 2015 ರಲ್ಲಿ ಪ್ರಾರಂಭವಾಯಿತು. ನಮ್ಮ ಪ್ರೀತಿ ತುಂಬಿದ ಸೇವೆ ಮತ್ತು ಪರಿಣಿತ ವೈದ್ಯರ ಚಿಕಿತ್ಸೆಯ ಕಾರಣದಿಂದ ವರದಾನ್ ಸಂಸ್ಥೆಯ ಮೇಲೆ ಜನರ ಪ್ರೀತಿ,ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗುತ್ತಾ ಹೋಯಿತು. ಅಪಾರವಾದ ಯಶಸ್ಸು, ವಿಸ್ತರಿಸುತ್ತಿರುವ ಜನಪ್ರಿಯತೆ ಮತ್ತು ಹೆಚ್ಚುತ್ತಿರುವ ಬೇಡಿಕೆಯ ಕಾರಣದಿಂದ ನಾವು ನಮ್ಮ ಸೇವೆಗಳನ್ನು ವಿಸ್ತರಿಸಿದೆವು ಮತ್ತು ವರದಾನ್ ನ ಎರಡನೇ ಶಾಖೆಯನ್ನು ಪ್ರಾರಂಭಿಸಿದೆವು. ಇಂದು ನಮ್ಮ ಎರಡೂ ಶಾಖೆಗಳು ಸಾವಿರಾರು ತಾಯಂದಿರ ಮಡಿಲಿಗೆ ಮಗುವನ್ನು ನೀಡಲು ಯಶ್ವಯಾಗಿವೆ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.

ವರದಾನ್ ivf ನಲ್ಲಿ ನಾವು ಪ್ರೀತಿ ಮತ್ತು ಆತ್ಮೀಯತೆಯಿಂದ ಸಂತಾನೋತ್ಪತ್ತಿ ಚಿಕಿತ್ಸೆಯನ್ನು ಮತ್ತು ಸೇವೆಯನ್ನು ನೀಡುವ ಧ್ಯೆಯವನ್ನು ಹೊಂದಿದ್ದೇವೆ.

ನಾವು ಪ್ರತಿಯೊಬ್ಬರ ಬಗ್ಗೆಯೂ ವಯಕ್ತಿಕ ಮತ್ತು ವಿಶೇಷ ಕಾಳಜಿ ವಹಿಸಿ ಆರೈಕೆ ಮಾಡುತ್ತೇವೆ ಮತ್ತು ಉನ್ನತ ನೈತಿಕ ಮಾನದಂಡಗಳನ್ನು ಪಾಲಿಸುತ್ತೇವೆ. ಅತ್ಯಾಧುನಿಕ ಸಂತಾನೋತ್ಪತ್ತಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಪ್ರತಿಯೊಬ್ಬ ದಂಪತಿಯ ಪೋಷಕರಾಗಬೇಕೆಂಬ ಕನಸನ್ನು ನನಸು ಮಾಡಲು ಬದ್ಧತೆಯಿಂದ ಶ್ರಮಿಸುತ್ತೇವೆ.

ನಾವು ವರದಾನ್ ಸಂಸ್ಥೆಯ ಯಶೋಗಾಥೆಯನ್ನು ತಿಳಿಸಿದ ನಂತರ ಹೆಚ್ಚಿನ ದಂಪತಿಗಳು ವರದಾನ್ ಸಂಸ್ಥೆಯನ್ನೇ ಏಕೆ ಆಯ್ಕೆ ಮಾಡಿಕೊಳ್ತಾರೆ ಅನ್ನೋ ಪ್ರಶ್ನೆ ಸಹಜವಾಗಿ ಎಲ್ಲರಿಗೂ ಕಾಡತ್ತೆ. ಅದಕ್ಕೆ ಉತ್ತರ ತುಂಬಾ ಸರಳವಾಗಿದೆ.

  • ಖಚಿತ ಮತ್ತು ನಿಖರ ಫಲಿತಾಂಶಗಳನ್ನು ನೀಡುವ ಕಾರಣದಿಂದ ನಮ್ಮ ವರದಾನ್ ivf ನ ಸಕ್ಸಸ್ ರೇಟ್ ತುಂಬಾ ಜಾಸ್ತಿ ಇದೆ.
  • ಇಲ್ಲಿ ಪ್ರತಿಯೊಂದು ದಂಪತಿಯ ಬಗ್ಗೆ ವಿಶೇಷ ಅಗತ್ಯಗಳಿಗೆ ವೈಯಕ್ತಿಕ ಆರೈಕೆ
  • ನಾವು ಅತ್ಯಂತ ನುರಿತ ಮತ್ತು ಅನುಭವಿ ಸಂತಾನೋತ್ಪತ್ತಿ ತಜ್ಞರ ತಂಡವನ್ನು ಹೊಂದಿದ್ದೇವೆ.
  • ನಾವು ಅತ್ಯಾಧುನಿಕ ಪ್ರಯೋಗಾಲಯಗಳನ್ನು ಹೊಂದಿದ್ದು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡುತ್ತೇವೆ.
  • ನಮ್ಮ ಸೇವೆಯೂ ಅತ್ಯಂತ ವಿಶ್ವಾಸಾರ್ಹ ಮತ್ತು ಪಾರದರ್ಶಕವಾಗಿದೆ.
  • ನಮ್ಮಲ್ಲಿ ಬರುವ ಇಲ್ಲ ದಂಪತಿಗಳಿಗೂ ಸಹ ಭಾವನಾತ್ಮಕವಾಗಿ ಸಮಾಲೋಚನೆ ನಡೆಸಿ ಅಗತ್ಯ ಮಾರ್ಗದರ್ಶನ ಮತ್ತು ಎಲ್ಲ ರೀತಿಯ ಬೆಂಬಲವನ್ನು ನೀಡಲಾಗುತ್ತದೆ.

ವರದಾನ್ ಸಂಸ್ಥೆಯ ಈ ಮಹಾ ಯಶಸ್ಸಿನ ಹಿಂದೆ ಈ ಸಂಸ್ಥೆಯ ಸಂಸ್ಥಾಪಕರು ಮತ್ತು ಮುಖ್ಯಸ್ಥರಾದ ಡಾ ವಿಜಯ್ ಕುಮಾರ್ ಪಿ ಕೆ ಯವರ ಪಾತ್ರ ತುಂಬಾ ದೊಡ್ಡದಿದೆ. ತಮ್ಮ ವರದಾನ್ ಸಂಸ್ಥೆಗಾಗಿ ಬೆಳಿಗ್ಗೆ 3.30ಕ್ಕೆ ಎದ್ದು ಅವಿರತವಾಗಿ ಶ್ರಮಿಸುವ ದಕ್ಷಿಣ ಭಾರತದ ಅಗ್ರಗಣ್ಯ ಲ್ಯಾಪಾರೊಸ್ಕೊಪಿ ತಜ್ಞರು ಮತ್ತು ಶಸ್ತ್ರಚಿಕಿತ್ಸಕರಾಗಿರುವ ವಿಜಯ್ ಕುಮಾರ್ ರವರು ಮಕ್ಕಳಿಲ್ಲದೆ ಕೊರಗುವ ದಂಪತಿಗಳ ಎಳ್ಗೆಗಾಗಿ ತಮ್ಮನ್ನು ತಾವು ಸಮರ್ಪಸಿಕೊಂಡಿದ್ದಾರೆ. 25 ವರ್ಷಗಳ ಅಭೂತಪೂರ್ವ ಅನುಭವ ಹೊಂದಿರುವ ಅವರು ದ್ರೋಣಚಾರ್ಯ ಪ್ರಶಸ್ತಿ ಸಮೇತ ಹಲವಾರು ಸಮ್ಮಾನಗಳಿಗೆ ಭಾಜನರರಾಗಿದ್ದಾರೆ.

ವರದಾನ್ ಸಂಸ್ಥೆಯ ಯಶಸ್ಸಿನ ಮತ್ತೊರ್ವ ರೂವಾರಿ ವೈಭವಿ ಗೋಪಶೆಟ್ಟಿಯವರು. ಡಾ ವಿಜಯ್ ಕುಮಾರ್ ರವರ ಧರ್ಮಪತ್ನಿಯಾಗಿರುವ ವೈಭವಿ ಯವರು ವರದಾನ್ ಸಂಸ್ಥೆಯ ಸಿಇಓ ಮತ್ತು ಮುಖ್ಯ ಕೌಂನ್ಸಿಲರ್ ಆಗಿದ್ದಾರೆ. ವರದಾನ್ ಸಂಸ್ಥೆಯ ಚೈತನ್ಯದ ಚಿಲುಮೆ ಆಗಿರುವ ವೈಭವಿ ಯವರು ರೋಗಿಗಳನ್ನು ತನ್ನ ಕುಟುಂಬದ ಸದಸ್ಯರಂತೆ ಸಹಾನುಭೂತಿ ಮತ್ತು ಭಾವನಾತ್ಮಕ ಬೆಂಬಲದೊಂದಿಗೆ ಮಾರ್ಗದರ್ಶನ ಮಾಡುತ್ತಾರೆ. ವರದಾನ್ ಸಂಸ್ಥೆಯ ಹೃದಯದಂತೆ ಕಾರ್ಯ ನಿರ್ವಹಿಸುವ ವೈಭವಿಯವರಿಗೆ 2 ಬಾರಿ ಬೆಸ್ಟ್ ಕೌನ್ಸಿಲರ್ ಅವಾರ್ಡ್ ಮತ್ತು ಹತ್ತು ಹಲವಾರು ಪ್ರಶಸ್ತಿಗಳು ಒಲಿದು ಬಂದಿವೆ.

ವಿಜಯ್ ಕುಮಾರ್ ರವರ 25 ವರ್ಷಗಳ ಅಪೂರ್ವ ಅನುಭವ, ವೈಭವಿಯವರ ಕ್ರಿಯಾಶೀಲತೆ ಮತ್ತು ಅವಿರತ ಶ್ರಮ, ಅತ್ಯಂತ ಪ್ರೀತಿಯಿಂದ ಆರೈಕೆ ಚಿಕಿತ್ಸೆ ನೀಡಿ ಆರೈಕೆ ಮಾಡುವ ಸಮರ್ಥ ವೈದ್ಯರು ಮತ್ತೆ ಸಿಬ್ಬಂದಿಗಳ ತಂಡ ಮತ್ತು ಎಲ್ಲರ ಅಪಾರ ಪ್ರೀತಿ ಮತ್ತು ವಿಶ್ವಾಸದ ಕಾರಣದಿಂದ ವರದಾನ್ ಸಾವಿರಾರು ದಂಪತಿಗಳ ಕನಸುಗಳಿಗೆ ಜೀವ ತುಂಬಿದ ಭರವಸೆಯ ಮಂದಿರವಾಗಿ ಯಶಸ್ಸಿನ ಉತ್ತುಂಗವನ್ನೆರಿದೆ. ಮುಂದಿನ ದಿನಗಳಲ್ಲೂ ಸಹ ವೈದ್ಯಕೀಯ ಪರಿಣತಿ, ನವೀನ ತಂತ್ರಜ್ಞಾನ, ಸಹಾನುಭೂತಿ ಮತ್ತು ಆತ್ಮೀಯ ಸೇವೆಯ ಮೂಲಕ ಇನ್ನಷ್ಟು ಜನರ ಜೀವನದಲ್ಲಿ ನೆಮ್ಮದಿಯನ್ನು ತುಂಬುತ್ತೆವೆ. ಇದು ಬರೀ ಮಾತಲ್ಲ ವರದಾನ್ ನ ವಾಗ್ದಾನ